Website Under construction

To be a member of Indias youngest political party please sms your voter ID to - 8088704747

Nav Bharat Democratic Party is a new generation party which is committed to socially progressive, economically developed & efficiently governed India. Politics to Nav Bharat, is an opportunity to serve. The party will identify and hold capable and committed leaders of our society to be our elected representatives.

Taking the first step towards "Nagara Swaraj" - (Urban Self Governance) Bengaluru’s recent unprecedented citizen outcry against the proposed steel flyover compelled the Karnataka Government to drop the project. This citizens’ movement brings us hope. When political leaders do wrong, we as citizens come together to correct them. Now the real question is, can we come together and participate in the democratic process to ensure that the right political leaders are elected for Government positions? Our answer is yes! We can, if we are willing. This would in turn assure us of a transparent, accountable and efficient Government.

Our cities are failing. From everyday traffic to water-shortage to waste-disposal to lack of adequate infrastructure, we are faced with innumerable problems that are becoming increasingly difficult to resolve. Quality of life is reduced and public apathy is at its peak. This is mainly due to lack of political will and vision.

Nav Bharat Democratic Party is committed to solving this problem by building strong local leaders with common sense, knowledge, willingness, good intent, and faith in the common man and in the Constitution of India. We are working towards improving local governance and incorporating citizens’ participation in local decision-making. The party is devoted to building and managing sustainable cities, beginning with Bengaluru.

Inspired by Mahatma Gandhiji’s idea of “Grama Swaraj” which ensures village self Governance – today, we have envisioned the idea of “Nagara Swaraj” which ensures "Urban self governance”.

In 1992, the Government of India enacted the 74th Constitutional Amendment to recognize urban local self-governance, including Municipal Corporations, Municipal Councils and Nagara Panchayats. This amendment ensures devolution and decentralization of decision-making in urban local matters. However, even 25 years after the promulgation this Constitutional guarantee, successive Karnataka Governments have failed to make urban local self-governance possible in the state. Over the years, several non-governments, non-profit organizations have petitioned for an amendment to the Karnataka Municipal Corporations Act, 1976 that will ensure the adoption of the 74th Amendment in full spirit, but to no avail. All efforts in this direction have been rendered ineffective by the lack of political will and quality local leadership.

Nav Bharat is appealing to the Karnataka State Government to set up an expert committee to re-work the conformity legislation for implementing 74th Constitutional Amendment in its true spirit.

Our suggestions include –

a. To amend the Karnataka Municipal Corporations Act 1976, towards providing a five-year term to the Mayor and Deputy Mayor. Empowering the offices of Mayor and Deputy Mayor will encourage the emergence of local leadership as well as the accountability of elected representatives.

b. The state should faithfully delegate the 18 powers mentioned in the 74th Constitutional Amendment to Municipalities in order to ensure sufficient autonomy.

c. To amend the constitution of Ward Committee and Area Sabha to ensure transparency.

d. To reconstitute the Metropolitan Planning Committee towards ensuring that elected leaders of urban local bodies have a greater say. This also implies that the Chief Minister should not be the Chairperson of the Metropolitan Planning Committee.

Nav Bharat will contest the upcoming BBMP ( Bruhat Bengaluru Mahanagara Palike ) election of 2020. The Party Manifesto will be determined following a public consultation with Bengaluru’s citizens. We urge you to send us your inputs towards building a Party Manifesto that truly reflects the core concerns of all Bengalureans.

"We have a dream of Nava Bengaluru, a city which is clean, green, safe, socially developed, economically empowered, technologically advanced, and culturally vibrant." Do you share a similar dream? Then you are already a part of our team!

Nava Bengaluru

“Of Bengalureans, By Bengalureans, For Bengalureans”

Our path - Nava Bengaluru - Nava Karnataka - Nav Bharat

ನವ ಭಾರತ ಪ್ರಜಾಸತ್ತಾತ್ಮಕ ಪಕ್ಷ ಹೊಸ ಪೀಳಿಗೆಯವರ ಪಕ್ಷವಾಗಿದೆ. ಸಾಮಾಜಿಕವಾಗಿ ಪ್ರಗತಿಪರ ನಿಲುವು, ಆರ್ಥಿಕವಾಗಿ ಅಭಿವೃದ್ಧಿಪರ ಚಿಂತನೆಗಳನ್ನು ಹೊಂದಿದ್ದು, ಭಾರತದಲ್ಲಿ ಸಮರ್ಥ ಆಡಳಿತ ನೀಡಲು ಬದ್ಧವಾಗಿದೆ. ‘ರಾಜಕಾರಣ’ಎನ್ನುವುದನ್ನು ನವಭಾರತವು ಸೇವೆ ಎಂದು ಭಾವಿಸಿದೆ. ಸಮಾಜಕ್ಕೆ ನಿಷ್ಠರಾಗಿರುವರನ್ನು ಪಕ್ಷ ಗುರುತಿಸಿ, ನಮ್ಮ ಚುನಾಯಿತ ಪ್ರತಿನಿಧಿಗಳಾಗಿ ಮಾಡುತ್ತೇವೆ.

"ನಮ್ಮ ಮೊದಲ ನಡಿಗೆ ನಗರ ಸ್ವರಾಜ್ಯದ ಕಡೆಗೆ "

ಕರ್ನಾಟಕ ಸರಕಾರವು ಈಚೆಗೆ ಬೆಂಗಳೂರಿಗೆ ಮಾರಕವಾಗಿದ್ದ, ಉಕ್ಕಿನ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿತ್ತು. ಸಾರ್ವಜನಿಕರು ರೂಪಿಸಿದ ಚಳವಳಿಯಿಂದಾಗಿ ಇಡೀ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿತು. ಇದು ನಮ್ಮ ಭರವಸೆಯನ್ನು ಹೆಚ್ಚಿಸಿದೆ. ರಾಜಕಾರಣಿಗಳು ಪ್ರಮಾದವೆಸಗಿದಾಗ ನಾಗರಿಕರಾಗಿ ನಾವು ಒಟ್ಟಾಗಿ ಅವರನ್ನು ಅನೇಕಬಾರಿ ತಿದ್ದಿದ್ದೇವೆ. ಇದೀಗ ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ಸಮರ್ಪಕ ನಾಯಕನನ್ನು ಸರ್ಕಾರದ ಸೂಕ್ತ ಸ್ಥಾನಗಳಿಗೆ ಚುನಾಯಿಸುವ ಕಾರ್ಯ ಮಾಡಬಲ್ಲೆವಾ? ಎಂಬ ನೈಜ ಪ್ರಶ್ನೆ ಎದುರಾಗಿದೆ. ನಮ್ಮ ಉತ್ತರ ಹೌದು ಮಾಡಬಲ್ಲೆವು! ನಾವು ದೃಢ ನಿರ್ಧಾರ ಮಾಡಬೇಕು ಅಷ್ಟೇ. ಇವು ಪಾರದರ್ಶಕ, ಉತ್ತರದಾಯಿತ್ವ ಮತ್ತು ಸಮರ್ಥ ಸರ್ಕಾರ ನೀಡಬಲ್ಲೆವೆಂಬ ಭರವಸೆ ಮೂಡಿಸುತ್ತದೆ. ನಮ್ಮ ನಗರಗಳು ವೈಫಲ್ಯತೆಯತ್ತ ವಾಲುತ್ತಿವೆ. ದಿನ ನಿತ್ಯದ ಸಂಚಾರ ದಟ್ಟಣೆಗಳಿಂದ ಆರಂಭಿಸಿ ನೀರಿನ ಕೊರತೆಯನ್ನು ಹಾದು, ತ್ಯಾಜ್ಯವಿಲೇವಾರಿವರೆಗೂ ಮೂಲ ಸೌಕರ್ಯಗಳ ಕೊರತೆಯಂತಹ ಹಲವು ಗಂಭೀರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲಾಗದ ಸ್ಥಿತಿಯತ್ತ ಜಾರುತ್ತಿದ್ದೇವೆ. ಜೀವನದ ಗುಣಮಟ್ಟ ಕುಸಿತವಾಗುತ್ತಿದ್ದು, ಸಾರ್ವಜನಿಕರ ನಿರಾಸಕ್ತಿ ತುತ್ತ ತುದಿಯತ್ತ ದಾವಿಸುತ್ತಿದೆ. ರಾಜಕಾರಣಿಗಳಲ್ಲಿ ಸ್ಪಷ್ಟಗುರಿ ದಿಟ್ಟ ನಿಲುವಿನ ಕೊರತೆಯೇ ಎಲ್ಲಕ್ಕೂ ಮೂಲವಾಗಿದೆ.

ನವ ಭಾರತ ಪ್ರಜಾಸತ್ತಾತ್ಮಕ ಪಕ್ಷ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ. ಸಾಮಾನ್ಯ ತಿಳಿವಳಿಕೆ, ಸಾಮಾನ್ಯ ಜ್ಞಾನ, ಉತ್ತಮ ಉದ್ದೇಶದ ನಿಲುವು, ಜನಸಾಮಾನ್ಯರಲ್ಲಿ ವಿಶ್ವಾಸವಿರಿಸಿರುವ, ಭಾರತದ ಸಂವಿಧಾನದಲ್ಲಿ ಅಚಲ ನಂಬಿಕೆಯುಳ್ಳಂತಹ ಸದೃಢ ನಾಯಕರನ್ನು ನಿರ್ಮಿಸಲಿದೆ. ಸ್ಥಳೀಯ ಆಡಳಿತವನ್ನು ಸುಧಾರಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ ಹಾಗೂ ಸ್ಥಾನೀಯ ನಿರ್ಧಾರಗಳನ್ನು ಮಾಡಲು ಸ್ಥಳೀಯರನ್ನು ತೊಡಗಿಸಿಕೊಳ್ಳುತ್ತೇವೆ. ಬೆಂಗಳೂರಿನೊಂದಿಗೆ ಆರಂಭಿಸಿ, ಸಮರ್ಥ ನಗರಗಳ ನಿರ್ಮಾಣ ಹಾಗೂ ನಿರ್ವಹಣೆ ಮಾಡಲು ಪಕ್ಷ ಅಚಲ ಶ್ರದ್ಧೆಯನ್ನು ಹೊಂದಿದೆ. ಗಾಂಧೀಜಿಯವರ ಹಳ್ಳಿಗಳ ವಿಕಾಸಕ್ಕಾಗಿ ‘ಗ್ರಾಮ ಸ್ವರಾಜ್’ ಚಿಂತನೆ ನಮಗೆ ಪ್ರೇರಣೆಯಾಗಿದ್ದು, ಅದನ್ನು ಇಂದಿನ ದಿನಮಾನಕ್ಕೆ ‘ನಗರ ಸ್ವರಾಜ್’ ಕಲ್ಪನೆ ನೀಡಿದ್ದೇವೆ. ಇದು ‘ನಗರ ಸ್ವಾಯುತ್ತತೆ’ಯನ್ನು ಖಚಿತಪಡಿಸುತ್ತದೆ.

1992ರಲ್ಲಿ ಭಾರತ ಸರ್ಕಾರವು ಸಂವಿಧಾನಕ್ಕೆ 74ನೇ ತಿದ್ದುಪಡಿ ತಂದು ಪುರಸಭೆ, ಪಟ್ಟಣ ಪಂಚಾಯಿತಿ, ಪಾಲಿಕೆಗಳ ಸ್ವಯಂ ಆಡಳಿತಕ್ಕೆ ಮಾನ್ಯತೆ ನೀಡಿತ್ತು. ಈ ತಿದ್ದುಪಡಿಯು ನಗರದ ಸ್ಥಳೀಯ ವಿಷಯದಲ್ಲಿ ವಿಕೇಂದ್ರೀಕರಣ ಮತ್ತು ನಿರ್ಧಾರ ಕೈಗೊಳ್ಳುವಿಕೆಯನ್ನು ಖಾತ್ರಿಪಡಿಸುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನದ ಅನುಮೋದನೆ ದೊರೆತು 25 ವರ್ಷಗಳ ತರುವಾಯವೂ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳು ನಗರಗಳ ಸ್ವಯಂ ಆಡಳಿತವನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ. ಗತಿಸಿದ ವರ್ಷಗಳಲ್ಲಿ ಹಲವು ಸರ್ಕಾರೇತರ, ಲಾಭರಹಿತ ಸಂಸ್ಥೆಗಳು ‘ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್-1976’ ತಿದ್ದುಪಡಿ ತರವಂತೆ ಮನವಿ ಮಾಡಿವೆ. ಈ 74ನೇ ತಿದ್ದುಪಡಿಗೆ ಪರಿಪೂರ್ಣ ಉತ್ಸಾಹ ತುಂಬುತ್ತದೆಯಾದರೂ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಗುಣಮಟ್ಟವಿಲ್ಲದ ನಾಯಕರಿಂದಾಗಿ ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳೆಲ್ಲಾ ನೆಲಕಚ್ಚಿವೆ.

ಸಂವಿಧಾನದ 74ನೇ ತಿದ್ದುಪಡಿಯನ್ನು ಯಥಾಸ್ಥಿತಿಯಲ್ಲಿ ಜಾರಿಗೆ ತರಲು "ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್-1976’ ಮರು ಪರಿಶೀಲನೆ ಮಾಡಲು ಪರಿಣಿತರ ತಂಡವೊಂದರ ರಚನೆ ಮಾಡುವಂತೆ ನವ ಭಾರತ ಪ್ರಜಾಸತ್ತಾತ್ಮಕ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆ. ರಾಜ್ಯ ಸರ್ಕಾರಕ್ಕೆ ನಮ್ಮ ಸಲಹೆಗಳಿವು....

1. ‘ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್-1976’ಗೆ ತಿದ್ದುಪಡಿ ತಂದು, ಮೇಯರ್ ಹಾಗೂ ಉಪಮೇಯರ್‍ಗಳಿಗೆ 5 ವರ್ಷಗಳ ಪೂರ್ಣ ಅವಧಿ ನೀಡಲಿ. ಮಹಾಪೌರ, ಉಪಮಹಾಪೌರರಿಗೆ ಹೆಚ್ಚಿನ ಅಧಿಕಾರ ದೊರೆತದಲ್ಲಿ ಸ್ಥಳೀಯ ನಾಯಕರಿಗೆ ಉತ್ತೇಜನ ಲಭ್ಯವಾಗಿ ಸ್ಥಾನೀಯ ಜನಪ್ರತಿನಿಧಿಗಳ ಹೊಣೆಗಾರಿಕೆ ವೃದ್ಧಿಯಾಗಲಿದೆ.
2. ಸಂವಿಧಾನದ 74ನೇ ತಿದ್ದುಪಡಿಯಲ್ಲಿ ನಮೂದಿಸಿರುವಂತೆ ರಾಜ್ಯ ಸರಕಾರವು ಎಲ್ಲಾ 18 ಇಲಾಖೆಗಳನ್ನು ಪಾಲಿಕೆಗೆ ಹಸ್ತಾಂತರಿಸಿ, ಅವುಗಳಿಗೆ ಪರಿಪೂರ್ಣ ಸ್ವಾಯುತ್ತತೆಯ ಖಚಿತತೆ ನೀಡಬೇಕು.
3. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ವಾರ್ಡ್ ಸಮಿತಿ ಮತ್ತು ಏರಿಯ ಸಭಾಗಳಿಗೆ ತಿದ್ದುಪಡಿಯಾಗಬೇಕು.
4. ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಮಹಾನಗರ ಯೋಜನಾ ಸಮಿತಿಗಳನ್ನು ಪುನಾರಚನೆ ಮಾಡಬೇಕು. ಅಂದರೆ ಮುಖ್ಯಮಂತ್ರಿಯು ‘ಮಹಾನಗರ ಯೋಜನಾ ಸಮಿತಿಯ’ ಅಧ್ಯಕ್ಷರಾಗಿರಲೇಬಾರದೆಂದು ಸೂಚಿಸುತ್ತದೆ.

ಮುಂಬರುವ 2020ನೇ ಬಿಬಿಎಂಪಿ ಚುನಾವಣೆಗಳಲ್ಲಿ "ನವ ಭಾರತ " ಸ್ಪರ್ಧೆಗಿಳಿಯಲಿದೆ. ಬೆಂಗಳೂರು ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ತನ್ನ ಪ್ರಣಾಳಿಕೆಯನ್ನು ಪಕ್ಷ ಸಿದ್ದಪಡಿಸಲಿದೆ. ಬೆಂಗಳೂರಿನ ಅಂತರಂಗದಲ್ಲಿ ಅಡಗಿರುವ ಪ್ರಮುಖ ಸಲಹೆಗಳನ್ನು ನಮಗೆ ಕಳುಹಿಸಿಕೊಟ್ಟು ಪ್ರಣಾಳಿಕೆಯ ರಚನೆಗೆ ನೆರವಾಗಬೇಕೆಂದು ತಮ್ಮಲ್ಲಿ ಗೌರವಪೂರ್ವಕ ಮನವಿ ಸಲ್ಲಿಸುತ್ತೇವೆ. ‘ಸ್ವಚ್ಛ, ಸುಂದರ, ಹಸಿರು, ಸುರಕ್ಷ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ, ಆರ್ಥಿಕವಾಗಿ ಸದೃಢವಾದ, ತಾಂತ್ರಿಕವಾಗಿ ಮುಂದುವರೆದ ಹಾಗೂ ಸಾಂಸ್ಕøತಿಕವಾಗಿ ರೋಮಾಂಚನಗೊಳೀಸುವ ನವ ಬೆಂಗಳೂರು ನಿರ್ಮಿಸುವ ಕನಸು ನಮ್ಮದು.’ ನಿಮ್ಮಲ್ಲೂ ಇದೇ ಕಲ್ಪನೆ ಇದ್ದರೆ, ಈಗಾಗಲೇ ನೀವು ನಮ್ಮ ತಂಡದ ಸದಸ್ಯರಾಗಿರುವಿರಿ!

ನಮ್ಮ ಹೆಜ್ಜೆ ನವ ಬೆಂಗಳೂರು- ನವ ಕರ್ನಾಟಕ - ನವ ಭಾರತ